ಬಿಎಂಟಿಸಿಗೆ ಕಲ್ಲು ತೂರಿದ ಆರೊಪಿಗಳ ಬಂಧನ

ಬಿಎಂಟಿಸಿಗೆ ಕಲ್ಲು ತೂರಿದ ಆರೊಪಿಗಳ ಬಂಧನ

ಬೆಂಗಳೂರು: ಬಿಎಂಟಿಸಿ ಬಸ್‍ಗೆ ಕಲ್ಲು ತೂರಿ ಚಾಲಕನಿಗೆ ಗಾಯಗೊಳಿಸಿ, ಹಾನಿ ಮಾಡಿದ್ದ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂದಿಸಿದ್ದಾರೆ. ಸೀತೇಗೌಡ, ತಿಮ್ಮೇಗೌಡ, ಜೀವನ್ ಆರೋಪಿಗಳು. ಸಿ.ಟಿ. ಮಾರ್ಕೆಟ್‍ನಿಂದ ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‍ಗೆ ನಿನ್ನೆ ಮಧ್ಯಾಹ್ನ ಕಾಮಾಕ್ಷಿಪಾಳ್ಯ  ಠಾಣೆ ವ್ಯಾಪ್ತಿಯ ವಿಜ್ಞೇಶ್ವರ ನಗರದ ಬಳಿ ಆರೋಪಿಗಳು ಬಸ್‍ಗೆ ಕಲ್ಲು ತೂರಿದರು. ಘಟನೆಯಲ್ಲಿ ಚಾಲಕ ನಂಜೇಗೌಡ ಅವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಸಿದ್ದಾರೆ.

NEWS DESK
TIMES OF BENGALURU