ಲಾಕ್‍ಡೌನ್ ಬದಲಿಗೆ 144 ಸೆಕ್ಷನ್ ಜಾರಿ ಮಾಡಿ

ಲಾಕ್‍ಡೌನ್ ಬದಲಿಗೆ 144 ಸೆಕ್ಷನ್ ಜಾರಿ ಮಾಡಿ

ಬೆಂಗಳೂರು : ವಿಧಾನಸೌಧದಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಸಭೆ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲಾಕ್‍ಡೌನ್ ಮಾಡುವುದು ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ. ಲಾಕ್‍ಡೌನ್ ಬದಲಿಗೆ 144 ಸೆಕ್ಷನ್ ಜಾರಿಗೆ ತನ್ನಿ, ಪೊಲೀಸರಿಗೆ ಅಧಿಕಾರ ಕೊಡಿ ಎಂದು ಕಾಂಗ್ರೆಸ್ ನಾಯಕರು ಲಾಕ್‍ಡೌನ್ ಡೌನ್ ಡೌನ್ ಎಂದು ಕೂಗಿದರು.

ಇನ್ನು ಕಾಂಗ್ರೆಸ್ ನಾಯಕ ರಾಮಲಿಂಗ ರೆಡ್ಡಿ ನೈಟ್ ಕಫ್ರ್ಯೂವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾತ್ರಿ ಕಫ್ರ್ಯೂನಿಂದ ಕೊರೊನಾ ಹೋಗಲ್ಲ. ಕೋವಿಡ್ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ. ಕಳೆದ ಬಾರಿ ಫುಡ್ ಕಿಟ್ ಕೊಟ್ಟಾಗ ಬರೀ ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಕೊಟ್ಟಿದ್ದೀರಿ. ಹೀಗೆ ಮಾಡೋದು ಸರೀನಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಲಾಕ್‍ಡೌನ್ ಬದಲಿಗೆ 144 ಸೆಕ್ಷನ್ ಜಾರಿ ಮಾಡುವಂತೆ ರಾಮಲಿಂಗ ರೆಡ್ಡಿ ಕೂಡ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

NEWS DESK
TIMES OF BENGALURU