ಸತ್ಯಾಗ್ರಹಕ್ಕೆ ಮುಂದಾದ ಸಾರಿಗೆ ನೌಕರರು ಪೊಲೀಸರ ವಶಕ್ಕೆ

ಸತ್ಯಾಗ್ರಹಕ್ಕೆ ಮುಂದಾದ ಸಾರಿಗೆ ನೌಕರರು ಪೊಲೀಸರ ವಶಕ್ಕೆ

ಬೆಂಗಳೂರು: ಪಟ್ಟು ಬಿಡದೆ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದ್ದು, ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಸತ್ಯಾಗ್ರಹ ನಡೆಸಲು ಮುಂದಾದ ಸಾರಿಗೆ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರಿಗೆ ನೌಕರರ ಸಂಘದ ಪದಾಕಾರಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು. ಕೋವಿಡ್ ಹಿನ್ನಲೆಯಲ್ಲಿ ಮುಷ್ಕರಕ್ಕೆ ಅವಕಾಶವಿರದ ಕಾರಣ ಪ್ರತಿಭಟನೆಗೆ ಮುಂದಾದ ನೌಕರರನ್ನು ಪೊಲೀಸರು ವಶಕ್ಕೆ ಪಡೆದು, ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕಳುಹಿಸಿಕೊಡಲಾಯಿತು.

NEWS DESK

TIMES OF BENGALURU