ಶುಕ್ರವಾರದಿಂದ ಚಿತ್ರಮಂದಿರಗಳು ಬಂದ್.!

ಶುಕ್ರವಾರದಿಂದ ಚಿತ್ರಮಂದಿರಗಳು ಬಂದ್.!

ಬೆಂಗಳೂರು: ಕಳೆದ ವರ್ಷದ ಕೊರೊನಾ ಲಾಕ್‍ಡೌನ್‍ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಮತ್ತೆ ಕೊರೊನಾ ಘಾತವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಚಿತ್ರಮಂದಿರದತ್ತ ಜನರು ಮುಖವನ್ನೂ ಮಾಡುತ್ತಿಲ್ಲ. ಈ ಹಿನ್ನೆಲೆಯಲಿ ಚಿತ್ರಮಂದಿರಗಳನ್ನೇ ಬಂದ್ ಮಾಡಲು ಪ್ರದರ್ಶಕರು ನಿರ್ಧರಿಸಿದ್ದಾರೆ. ಈ ಕುರಿತು ಪ್ರದರ್ಶಕರ ವಲಯದ ಅಧ್ಯಕ್ಷ ಕೆ. ಚಂದ್ರಶೇಖರ್ ಮಾಹಿತಿ ನೀಡಿದ್ದು, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ 650 ಚಿತ್ರಮಂದಿರಗಳು ಮುಚ್ಚಿವೆ. ಥಿಯೇಟರ್‍ಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಶುಕ್ರವಾರದಿಂದ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು. ಹೊಸ ಚಿತ್ರಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದು, ಚಿತ್ರಮಂದಿರಗಳು ನಷ್ಟದಲ್ಲಿವೆ. ಹಾಗಾಗಿ ಪ್ರದರ್ಶಕರ ವಲಯದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

NEWS DESK
TIMES OF BENGALURU