ಸಾರಿಗೆ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್

ಸಾರಿಗೆ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಸಿ ಸಾರಿಗೆ ನೌಕರರು ನಡೆಸುತ್ತಿರುವಂತ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಅತ್ತ ಸರ್ಕಾರ ಬೇಡಿಕೆ ಈಡೇರಿಕೆಗೆ ನಕಾರ ವ್ಯಕ್ತಪಡಿಸಿದ್ರೇ.. ಇತ್ತ ಸಾರಿಗೆ ನೌಕರರು ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯೋದಿಲ್ಲ ಎಂಬುದಾಗಿ ಮುಷ್ಕರ ಮುಂದುವರೆಸಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯ ವ್ಯತ್ಯಯ ಮೂಲಭೂತ ಹಕ್ಕಾಗಿದೆ. ಈ ಹಕ್ಕಿಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಮುಷ್ಕರ ಬಿಟ್ಟು ಕೂಡಲೇ ಸಾರಿಗೆ ಸಂಚಾರ ಆರಂಭಿಸುವಂತೆ ಮುಷ್ಕರ ನಿರತ ಸಾರಿಗೆ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಈ ಕುರಿತಂತೆ ಇಂದು ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ ಓಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು, ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ವ್ಯತ್ಯಯದಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಈಗ ಶೇ. 44ರಷ್ಟು ಬಸ್ ಸಂಚಾರ ಮಾತ್ರವೇ ಇದೆ. ಕೋವಿಡ್‍ನ ಸಂಕಷ್ಟದಿಂದಾಗಿ ಜನರು ತತ್ತರಿಸಿದ್ದಾರೆ. ಆಸ್ಪತ್ರೆಗೆ ಹೋಗೋದಕ್ಕೆ ಬಸ್ ಸಂಚಾರ ಇಲ್ಲದೇ ಕಷ್ಟ ಪಡುವಂತಾಗಿದೆ. ಇನ್ನೂ ಮುಂದುವರೆದು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.

NEWS DESK

TIMES OF BENGALURU