ಮಾದಕ ವಸ್ತು ಮಾರಾಟ; ನೈಜೀರಿಯಾ ಪ್ರಜೆ ಬಂಧನ

ಬೆಂಗಳೂರು : ಸರ್ವೀಸ್ ರಸ್ತೆಯೊಂದರಲ್ಲಿ ಮಾದಕ ವಸ್ತು ಹೆರಾಯಿನ್ ಮತ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂ
ಧಿಸಿ ೨.೪೦ ಲಕ್ಷ ರೂ. ಮೌಲ್ಯದ ೧೦ ಗ್ರಾಂ ಹೆರಾಯಿನ್ ಮತ್ತು ಕೊಕೈನ್ ವಶಪಡಿಸಿಕೊಂಡಿದ್ದಾರೆ.

ಫೊಫಾನಾ ಜೈಕ್ನಾ ಅಲಿಯಾಸ್ ಜೇಮ್ಸ್ (೨೭) ನಿಂದ ಬಂದ ನೈಜೀರಿಯಾ ಪ್ರಜೆ. ಈತ ಜಯಂತಿನಗರದ ೪ನೆ ಕ್ರಾಸ್ ಈಸ್ಟರ್ ಎನ್‌ಕೈವ್‌ನಲ್ಲಿ ನೆಲೆಸಿದ್ದನು. ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‌ಗಳನ್ನು ಹತ್ಯೆ ಮಾಡಲು ಹಿರಿಯ ಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಗೋವಿಂದಪುರ ಠಾಣೆ ಪೊಲೀಸರು ತಂಡಗಳನ್ನು ಮಾಡಿಕೊಂಡು ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಎಚ್‌ಬಿಆರ್ ಲೇಔಟ್, ೫ನೆ ಬ್ಲಾಕ್, ಅಂಬೇಡ್ಕರ್ ಮೈದಾನದ ಸರ್ವೀಸ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಮಾದಕ ವಸ್ತುಗಳು, ೫೦೦ರೂ. ಹಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

NEWS DESK

TIMES OF BENGALURU