ಯಲಹಂಕದಲ್ಲಿ ತೆರೆದ ಚಿತಾಗಾರ ನಿರ್ಮಾಣ

ಬೆಂಗಳೂರು : ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಾವು ಹೆಚ್ಚಳವಾಗುತ್ತಿದ್ದು, ಶವಕ್ಕೆ ಬೆಂಕಿ ಇಡಲು ಚಿತಾಗಾರದ ಮುಂದೆ ದಿನಗಟ್ಟಲೆ ಕಾದುನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದ ಯಲಹಂಕದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ತೆರೆದ ಚಿತಾಗಾರವನ್ನು ನಿರ್ಮಿಸಲು ಮುಂದಾಗಿರುವುದಾಗಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಉಪ ಆಯುಕ್ತರಿಗೆ ಆದೇಶ ನೀಡಿದ್ದು, ಕೂಡಲೇ ತೆರೆದ ಸ್ಮಶಾನವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ. ನಗರದಲ್ಲಿ ಒಟ್ಟು 5 ಸ್ಮಶಾನಗಳಲ್ಲಿ ಮಾತ್ರ ಕೊರೊನಾ ರೋಗಿಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ.

ಆದರೆ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೊದಲೆಲ್ಲಾ ಒಂದು ಅಥವಾ ಎರಡು ಕೊರೊನಾ ಸೋಂಕಿತರ ಶವ ಬಂದರೆ ಇದೀಗ ದಿನಕ್ಕೆ 30ಕ್ಕೂ ಅಧಿಕ ಶವಗಳು ಸ್ಮಶಾನ ಸೇರುತ್ತಿವೆ. ಹಾಗೆಯೇ ಆಂಬ್ಯುಲೆನ್ಸ್ ಚಾಲಕರು ಟೋಕನ್ ಪಡೆದು ದಿನಗಟ್ಟಲೆ ಶವವಿಟ್ಟುಕೊಂಡು ಕಾಯಬೇಕಾದ ಪರಿಸ್ಥಿತಿ ಇದೆ, ರಾತ್ರಿ 2 ಗಂಟೆಯವರೆಗೂ ಸರತಿಯಲ್ಲಿ ನಿಂತು ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

NEWS DESK

TIMES OF BENGALURU