ಜೂಜು ಅಡ್ಡೆಗಳ ಕಿಂಗ್ ಪಿನ್ ಅರೆಸ್ಟ್

ಬೆಂಗಳೂರು : ರಾಜಧಾನಿಯಲ್ಲಿ ರಿಕ್ರಿಯೇಷನ್ ಕ್ಲಬ್, ವಿಡಿಯೋ ಗೇಮ್‍ನಂಥ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದ ಪ್ರಮುಖ ಕಿಂಗ್ ಪಿನ್ ಹರಿರಾಜ್ ಶೆಟ್ಟಿ ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಧಾನಿಯಲ್ಲಿ ರಿಕ್ರಿಯೇಷನ್ ಕ್ಲಬ್ ಮತ್ತು ವಿಡಿಯೊ ಗೇಮ್ ಸೆಂಟರ್ ಗಳನ್ನು ನಡೆಸುತ್ತಿದ್ದ. ಈ ಮೂಲಕ ಬೆಂಗಳೂರಿನಲ್ಲಿ ದೊಡ್ಡ ಜಾಲ ಸೃಷ್ಟಿಸಿದ್ದ. ಈತನ ಅಕ್ರಮ ಜಾಲದ ವಿರುದ್ಧ ಕ್ರಮ ಜರುಗಿಸುವ ಪೊಲೀಸರಿಗೆ ಅಮಿಷ ಒಡ್ಡುವ ಮೂಲಕ ಖೆಡ್ಡಾಗೆ ಬೀಳಿಸಿ ತೇಜೋವಧೆ ಮಾಡುತ್ತಿದ್ದ ಎನ್ನಲಾಗಿದೆ.

ಬಿ. ಹರಿರಾಜ್ ಶೆಟ್ಟಿ ವಿರುದ್ಧ ವಯ್ಯಾಲಿಕಾವಲ್, ಹೈಗ್ರೌಂಡ್ಸ್, ಕಬ್ಬನ್ ಪಾರ್ಕ್, ಕೋರಮಂಗಲ, ಅಶೋಕನಗರ ಬಸವೇಶ್ವರನಗರ ಪೆÇಲೀಸ್ ಠಾಣೆಗಳಲ್ಲಿ ಈವರೆಗೂ ಹದಿಮೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಹರೀಶ್ ರಾಜ್‍ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಹರೀಶ್ ರಾಜ್ ನನ್ನು ಬಂಧಿಸಲಾಗಿದೆ.

NEWS DESK

TIMES OF BENGALURU