ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಕರೆದ ಬಿಬಿಎಂಪಿ

ಬೆಂಗಳೂರು : ಪ್ರತಿನಿತ್ಯ ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲುತ್ತಿರುವುದರಿಂದ ಉತ್ಪತ್ತಿಯಾಗುತ್ತಿರುವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಬಿಬಿಎಂಪಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಮಾಮೂಲು ದಿನಗಳಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ 40 ಟನ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು.

ಇದರ ಜತೆಗೆ ನಿತ್ಯ 25 ಟನ್‍ಗೂ ಹೆಚ್ಚು ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ವಿಲೇವಾರಿ ಮಾಡುವುದು ಹೇಗೆ ಎಂಬ ಚಿಂತೆ ಬಿಬಿಎಂಪಿಯನ್ನು ಕಾಡುತ್ತಿದೆ. ಸೋಂಕಿತರು ಬಳಸುವ ಪಿಪಿಇ ಕಿಟ್‍ಗಳು, ಮಾಸ್ಕ್‍ಗಳು, ವೈದ್ಯಕೀಯ ತ್ಯಾಜಗಳು ರಸ್ತೆಗಳು, ಚಿತಾಗಾರಗಳು, ಆಸ್ಪತ್ರೆಗಳ ಮುಂಭಾಗಗಳಲ್ಲಿ, ಕಸದ ತೊಟ್ಟಿಗಳಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ದಿನನಿತ್ಯ ತ್ಯಾಜ್ಯದ ಜತೆಗೆ ಕೊರೊನಾ ತ್ಯಾಜ್ಯವೂ ಸೇರಿ ಪ್ರತಿನಿತ್ಯ 65 ಟನ್‍ಗೂ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿರುವುದನ್ನು ಸವಾಲಾಗಿ ಸ್ವೀಕರಿಸಿರುವ ಬಿಬಿಎಂಪಿ ತ್ಯಾಜ್ಯ ವಿಲೇವಾರಿಗಾಗಿ ಟೆಂಡರ್ ಕರೆದಿದೆ.

NEWS DESK

TIMES OF BENGALURU