ಚಿತಾಗಾರದ ಮುಂದೆ ಕ್ಯೂ ನಿಂತ ಆ್ಯಂಬುಲೆನ್ಸ್‌ಗಳು

ಬೆಂಗಳೂರು: ನಗರದಲ್ಲಿ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ಮುಂದುವರೆದಿದೆ. ಇಡೀ ದಿನ ಶವ ಸಂಸ್ಕಾರ ನಡೆಸುತ್ತಿದ್ದರೂ ವಿದ್ಯುತ್ ಚಿತಾಗಾರಗಳಲ್ಲಿ ಮುಂದೆ ಶವ ಹೊತ್ತು 20ರಿಂದ 30 ಆ್ಯಂಬುಲೆನ್ಸ್‌ಗಳು ಸರತಿ ಸಾಲಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದ ದೃಶ್ಯ ಮನಕರಗಿಸುವಂತಿತ್ತು. ಯಲಹಂಕ ವಲಯದ ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ರಾತ್ರಿ 10ರ ಸುಮಾರಿಗೆ 14 ಶವಗಳನ್ನು ದಹಿಸಲಾಗಿತ್ತು.

ಇನ್ನೂ 15 ಶವಗಳ ಅಂತ್ಯಕ್ರಿಯೆ ಬಾಕಿ ಇತ್ತು. ಬುಧವಾರ ಸಂಜೆ ಹೊತ್ತಿಗೆ ಕೂಡ್ಲುಗೇಟ್ ವಿದ್ಯುತ್ ಚಿತಾಗಾರದಲ್ಲಿ ಬರೋಬ್ಬರಿ 30 ಆ್ಯಂಬುಲೆನ್ಸ್‌ಗಳು ನಿಂತಿದ್ದವು. ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಪೀಣ್ಯ ಚಿತಾಗಾರದಲ್ಲಿ 14 ಶವ ಸಂಸ್ಕಾರವಾಗಿದ್ದು, 14 ಆಂಬುಲೆನ್ಸ್‍ಗಳಲ್ಲಿದ್ದ ಶವಗಳು ತಮ್ಮ ಸರದಿಗೆ ಕಾದಿದ್ದವು.

NEWS DESK

TIMES OF BENGALURU