ಬೆಂಗಳೂರು: ನಗರದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ವಿಪರೀತ ಹೆಚ್ಚಾಗಿದ್ದು, ಆಕ್ಸಿಜನ್ ಸಿಲಿಂಡರ್ಗಾಗಿ ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಥಣಿಸಂದ್ರದ ಯುನೈಟೆಡ್ ಫೋರಂ, ಜೆ.ಸಿ. ನಗರದ ಹೆಲ್ಪ್ ಕ್ರಿಸ್ಸಿ ಮ್ಯಾನೇಜ್ಮೆಂಟ್, ಬಸವನಗುಡಿಯ ಮೈಸ್ಸಿ ಮಿಷನ್ ಸೇರಿದಂತೆ ಹಲವು ಸರ್ಕಾರೇತರ ಸಂಸ್ಥೆಗಳು ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ನೀಡುತ್ತಿವೆ. ಆದರೆ, ಎಲ್ಲರಿಗೂ ವೈದ್ಯಕೀಯ ಆಮ್ಲಜನಕ ಪೂರೈಸಲು ಅವುಗಳಿಗೂ ಸಾಧ್ಯವಾಗುತ್ತಿಲ್ಲ. ನಿರೀಕ್ಷೆಗಿಂತ ಐದಾರು ಪಟ್ಟು ಹೆಚ್ಚು ಬೇಡಿಕೆ ಹೆಚ್ಚಾಗುತ್ತಿದೆ.
NEWS DESK
TIMES OF BENGALURU