ಚಿತಾಗಾರ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ನಿರ್ಧಾರ

ಬೆಂಗಳೂರು: ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊದಲು ಚಿಕಿತ್ಸೆ ಪಡೆಯಲು ಬೆಡ್ ಮತ್ತು ಆಕ್ಸಿಜನ್‍ಗಾಗಿ ಒದ್ದಾಡಬೇಕಾದ ಪರಿಸ್ಥಿತಿ ಇದ್ರೆ ಮತ್ತೊಂದೆಡೆ ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಪರದಾಡಬೇಕಾಗಿದೆ. ಇದರೊಂದಿಗೆ ಚಿತಾಗಾರದ ಸಿಬ್ಬಂದಿ ಕೂಡಾ ಮೃತರ ಕುಟುಂಬಗಳಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಇದೆಲ್ಲದಕ್ಕೂ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ. ಚಿತಾಗಾರ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಚಿತಾಗಾರ ಸಿಬ್ಬಂದಿಗೆ ಪೆÇ್ರೀತ್ಸಾಹ ಧನ ನೀಡಲು ನಿರ್ಧರಿಸಿದ ಬಿಬಿಎಂಪಿ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಮುಂದಿನ 2 ತಿಂಗಳ ಕಾಲ ಚಿತಾಗಾರ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಕೊರೋನಾ ಮತ್ತು ಕೊರೋನೇತರ ಶವಗಳ ಅಂತ್ಯಸಂಸ್ಕಾರಕ್ಕೆ 500 ರೂ. ಪ್ರೋತ್ಸಾಹ ಧನ ನಿಗದಿಯಾಗಿದ್ದು ಮುಂದಿನ ಎರಡು ತಿಂಗಳ ಕಾಲ ಚಿತಾಗಾರ ಸಿಬ್ಬಂದಿಗೆ ಸಂಬಳದೊಂದಿಗೆ 500 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಲಾಗಿದೆ.