ಬಿಡುವಿಲ್ಲದೆ ಶವಗಳನ್ನು ಸುಟ್ಟು ಯಂತ್ರ ರಿಪೇರಿ

ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಚಿತಾಗಾರಗಳ ಮುಂದೆಯೂ ಶವಗಳನ್ನು ಹೊತ್ತ ಆಂಬ್ಯುಲೆನ್ಸ್ ಗಳು ಸಾಲು ಸಾಲಾಗಿ ನಿಂತಿವೆ. ಸಂಬಂಧಿಕರ  ಆಕ್ರಂಧನ ಮುಂದುವರಿದಿದೆ. ಅಂತಿಮ ಸಂಸ್ಕಾರ ಮಾಡಲು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಸ್ಥಳವಿಲ್ಲ, ಸತ್ತವರನ್ನು ಸಕಾಲದಲ್ಲಿ ಸುಡಲು ಸ್ಮಶಾನದಲ್ಲಿ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯಿಡೀ ಅಂತ್ಯಕ್ರಿಯೆ ಮಾಡಿದರೂ ದಹನ ಕಾರ್ಯ ಮುಗಿಯುತ್ತಿಲ್ಲ. ಸಾಕಷ್ಟು ಆಯಂಬುಲೆನ್ಸ್ ಬಂದು ಸುಮನಹಳ್ಳಿ ಚಿತಾಗಾರದ ಮುಂದೆ ಕ್ಯೂ ನಿಂತಿವೆ. ತಡರಾತ್ರಿ 2 ಗಂಟೆವರೆಗೂ ದಹನ ಕಾರ್ಯ ನಡೆಸಿದ್ದರು. ನಿನ್ನೆ ಒಟ್ಟಾರೆಯಾಗಿ 25 ಕೋವಿಡ್ ಮೃತದೇಹ ದಹನ ಮಾಡಲಾಗಿದೆ. ಸದ್ಯ ಚಿತಾಗಾರ ಯಂತ್ರದ ರಿಪೇರಿಯಾಗಿದ್ದು, ದಹನ ಕ್ರಿಯೆ ಕಾರ್ಯ ನಿಂತು ಹೋಗಿದೆ.. ದೇಹ ದಹನ‌ ಮಾಡಿ ಹೊಗೆ ಹೋಗ್ತಾ ಇರಲಿಲ್ಲ, ದಹನ ಮಾಡಿ ಸ್ಲಾಬ್ ತುಂಬನೇ ಬಿಸಿಯಾಗಿರುತ್ತೆ ಅದನ್ನ ಕೂಲ್ ಮಾಡಿ ಯಂತ್ರ ಸರಿಪಡಿಸುತ್ತಿದ್ದಾರೆ .

NEWS DESK
TIMES OF BENGALORU