ಬೆಂಗಳೂರು : ರಾಜಧಾನಿ ಬೆಂಗಳೂರು ನಗರವನ್ನು ತಲ್ಲಣಗೊಳಿಸಿದ್ದು, ನಿತ್ಯ ಪ್ರಕರಣಗಳ ಸಂಖ್ಯೆ ದಿನೇ ದಿನೇ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಗುರುವಾರ 15,244 ಮಂದಿಗೆ ಸೋಂಕು ತಗಲುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.
ಇದೇ ವೇಳೆ 68 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕು ಯಾವ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದರೆ, ಬೆಂಗಳೂರು ನಿವಾಸಿಗಳಲ್ಲಿ ಪ್ರತಿ 70 ಮಂದಿಗೆ ಸರಾಸರಿ ಒಬ್ಬರು ಸೋಂಕಿತರಾಗುತ್ತಿದ್ದಾರೆ ಮತ್ತು ಪ್ರತಿ ನಿಮಿಷಕ್ಕೆ 10.58 ಮಂದಿ ಸೋಂಕುಪೀಡಿತರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
NEWS DESK
TIMES OF BENGALURU