ವೀಕೆಂಡ್ ಕರ್ಫ್ಯೂ; ಮೆಟ್ರೋ ಸಂಚಾರ ರದ್ದು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ವಿಧಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗಿನ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7.30ವರೆಗೆ ನಮ್ಮ ಮೆಟ್ರೋ ಸಂಚಾರಿಸಲಿದೆ. ಆದ್ರೇ ವೀಕ್ ಎಂಡ್ ಕರ್ಪ್ಯೂನಿಂದಾಗಿ ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲು ಸೇವೆಯನ್ನು ರದ್ದು ಪಡಿಸಲಾಗಿದೆ.

ಈ ಕುರಿತಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿ ಎಲ್) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ನಗರದಲ್ಲಿ ಕರ್ಪ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೋ ರೈಲು ಕಾರ್ಯಾಚರಣೆಯ ವೇಳಾಪಟ್ಟಿಯನ್ನು ದಿನಾಂಕ04-05-2021ರವರೆಗೆ ಪರಿಷ್ಕರಿಸಲಾಗಿದೆ.

NEWS DESK

TIMES OF BENGALURU