ಕರ್ಪ್ಯೂ ನಡುವೆಯು ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾತ್ರಿ ಕಪ್ರ್ಯೂ ಹಾಗೂ ವಾರಾಂತ್ಯ ಕಪ್ರ್ಯೂ ಜಾರಿಗೊಳಿಸಲಾಗಿದೆ. ವಾರಾಂತ್ಯ ಕರ್ಪ್ಯೂ ವೇಳೆಯಲ್ಲಿ ಅಗತ್ಯ ಸೇವೆ ಹೊರತಾಗಿ ಎಲ್ಲವನ್ನು ಬಂದ್ ಮಾಡಲು ಸೂಚಿಸಲಾಗಿದೆ. ಇದರ ಮಧ್ಯೆಯೂ ಅಗತ್ಯ ಸಾರಿಗೆ ಸೇವೆ ಒದಗಿಸುವಂತೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿಸಲಾಗಿದೆ. ಈ ಹಿನ್ನಲೆಯಲ್ಲಿ ಇಂದು 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬೆಂಗಳೂರಿನಲ್ಲಿ ನಿಷೇಧಿತವಲ್ಲದ ಕೈಗಾರಿಕೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ತೆರಳುವ ಜನರ ಅನುಕೂಲಕ್ಕಾಗಿ 450 ರಿಂದ 500 ಬಸ್ ಸಾರಿಗೆ ಸಂಚಾರ ಇರಲಿದೆ.

NEWS DESK

TIMES OF BENGALURU