ವಾರ ಪೂರ್ತಿ ಕರ್ಫ್ಯೂ ಜಾರಿಗೆ ಚಿಂತನೆ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಆದರೆ, ಇದೀಗ ವಾರ ಪೂರ್ತಿ ಕರ್ಪ್ಯೂ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊರೊನಾ ನಿಯಂತ್ರಣಕ್ಕೆ ವಾರ ಪೂರ್ತಿ ಕರ್ಪ್ಯೂ ಹೇರಿದರೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಜನರ ಕೇಳಬೇಕಲ್ಲ. ವಾರವೀಡಿ ಕರ್ಪ್ಯೂ ಜಾರಿ ಮಾಡುವುದು ಬೇಡವೆಂದು ಹೇಳುತ್ತಿದ್ದಾರೆ ಎಂದರು.

NEWS DESK
TIMES OF BENGALURU