2 ಪ್ರಶಸ್ತಿ ಗಳಿಸಿದ ಬೆಂಗಳೂರು ನಗರ ಜಿಲ್ಲೆ

ನವದೆಹಲಿ : ಪಂಚಾಯತ್ ರಾಜ್ ದಿವಸ್ ಆಚರಣೆಯ ಅಂಗವಾಗಿ ಇಂದು ಮಾನ್ಯ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಎರಡು ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತ್ ಗೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ ಪ್ರಶಸ್ತಿ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನಕುಂಟೆ ಗ್ರಾಮ ಪಂಚಾಯತ್ ಗೆ, ಗ್ರಾಮಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಸಿದ್ಧತೆ ಹಾಗೂ ಅನುಷ್ಠಾನ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ತಿಳಿಸಿದ್ದಾರೆ.

NEWS DESK

TIMES OF BENGALURU