ಬೆಂಗಳೂರು : ಕೊರೋನ ಎರಡನೆ ಅಲೆ ಮೊದಲನೆ ಅಲೆಗಿಂತ ತೀವ್ರ ಸ್ವರೂಪದಲ್ಲಿದ್ದು, ರೂಪಾಂತರಿ ಕೊರೋನ ವೈರಸ್ ವೈದ್ಯಕೀಯ ವಿಭಾಗವನ್ನೇ ದಾರಿ ತಪ್ಪಿಸುತ್ತಿದೆ. ಬೇರೆ ದೇಶದ ರೂಪಾಂತರಿ ವೈರಸ್ ರಾಜ್ಯದಲ್ಲಿ ಪತ್ತೆಯಾಗಿಲ್ಲ. ಇದರ ಗುಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಎರಡನೇ ಅಲೆ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ, ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೊರೋನ ಎರಡನೆ ಅಲೆ ಗಂಭೀರ ಸ್ವರೂಪದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೋಂಕು ನಿಯಂತ್ರಣಕ್ಕೆ ಬಿಗಿಯಾದ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕರು ಅನಗತ್ಯ ಮನೆಯಿಂದ ಹೊರಗಡೆ ಬರುವುದು, ಗುಂಪು ಸೇರುವುದನ್ನು ತಪ್ಪಿಸಬೇಕು. ಲಸಿಕೆಗಳನ್ನು ಮೊದಲು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
NEWS DESK
TIMES OF BENGALURU