ವೀಕೆಂಡ್ ಕರ್ಫ್ಯೂ : 886 ವಾಹನಗಳು ಜಪ್ತಿ

ಬೆಂಗಳೂರು : ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದ್ದು, ಕರ್ನಾಟಕದಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕ್ ಎಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ತೂ ವಿಧಿಸಿದೆ.

ವೀಕ್ ಎಂಡ್ ಕರ್ಪ್ಯೂ ದಿನವಾದ ನಿನ್ನೆ ಒಂದೇ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 886 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕರ್ಪ್ಯೂ ನಿಯಮ ಉಲ್ಲಂಘಿಸಿದ ಹಿನ್ನೆಲೆ 841 ಬೈಕ್, 20 ಆಟೋ, 25 ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕರ್ಪ್ಯೂ ಮೊದಲ ದಿನವಾದ ಶನಿವಾರ 1,149 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದರು.

NEWS DESK

TIMES OF BENGALURU