15 ದಿನ ಲಾಕ್ ಡೌನ್ ಮಾಡಲೇ ಬೇಕು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪುತ್ತಿದೆ. ಕೊರೋನಾ ಸೋಂಕಿನ ನಿಯಂತ್ರಣ ಬರಬೇಕಾದ್ರೆ.. ರಾಜ್ಯದಲ್ಲಿ 15 ದಿನ ಸಂಪೂರ್ಣ ಲಾಕ್ ಡೌನ್ ಅಗತ್ಯವಿದೆ. ಹೀಗಾಗಿ 15 ದಿನ ಕೊರೋನಾ ನಿಯಂತ್ರಣಕ್ಕಾಗಿ ಸಂಪೂರ್ಣ ಲಾಕ್ ಡೌನ್ ಮಾಡಿ ಎಂಬುದಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇಂದಿನ ಸಂಪುಟ ಸಭೆ ಇನ್ ಸೈಡ್ ಮಾಹಿತಿಯ ಪ್ರಕಾರ, ಸಚಿವ ಡಾ.ಕೆ.ಸುಧಾಕರ್ ಅವರು ಲಾಕ್ ಡೌನ್ ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 15 ದಿನ ಲಾಕ್ ಡೌನ್ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಅಂತೆ. 15 ದಿನ ಅವಕಾಶ ಸಿಕ್ಕರೆ ಆಕ್ಸಿಜನ್, ಮೆಡಿಕಲ್ ಸಪ್ಲೈ ಸೇರಿದಂತೆ ಅಗತ್ಯ ತಯಾರಿ ಮಾಡಬಹುದು. ವೈದ್ಯರ ಮೇಲೆ ಒತ್ತಡ ಕಮ್ಮಿಯಾಗಲಿದೆ. ಇಲ್ಲವಾದರೆ ಇಲಾಖೆ ಸಂಪೂರ್ಣವಾಗಿ ಎಲ್ಲವನ್ನ ನಿರ್ವಹಣೆ ಮಾಡುವುದು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.

NEWS DESK

TIMES OF BENGALURU