ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಉತ್ತಮವೆಂದು ತಜ್ಞರು ಈಗಾಗಲೇ ಸಲಹೆ ನೀಡಿದ್ದು, ಈಗಿರುವ ಟಫ್ರೂಲ್ಸ್ ಮುಂದುವರಿಕೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ಸಚಿವರಿಗೆ ಸಂಪೂರ್ಣ ಲಾಕ್ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂಬ ಅಭಿಪ್ರಾಯವಿದ್ದು, ಆದರೆ ಹಲವು ಸಚಿವರು ಲಾಕ್ಡೌನ್ ವಿರೋಧಿಸುತ್ತಿದ್ದಾರೆ. ಲಾಕ್ಡೌನ್ ಮಾಡಿದರೆ ಜನಸಾಮಾನ್ಯರಿಗೆ ಸಂಕಷ್ಟವಾಗಲಿದೆ. ಜನಜೀವನ ಅಸ್ತವ್ಯಸ್ಥವಾಗಲಿದೆ. ಸರ್ಕಾರದ ಆದಾಯಕ್ಕೆ ಹೊಡೆತ ಬೀಳಲಿದೆ. ವ್ಯಾಪಾರ ವಹಿವಾಟು ಬಂದ್ನಿಂದ ಆರ್ಥಿಕ ವ್ಯವಸ್ಥೆ ಹಾಳಾಗಲಿದೆ ಎಂಬುವುದು ಕೆಲ ಸಚಿವರ ವಾದವಾಗಿದೆ. ಇಂದು ಸಂಜೆ ಸಿಎಂ ಮಹತ್ವದ ಸಭೆಯ ನಂತರ ತೀರ್ಮಾನ ಹೊರ ಬೀಳಲಿದೆ.
NEWS DESK
TIMES OF BENGALURU