ಬೆಂಗಳೂರು : ರಾಜ್ಯದಲ್ಲಿ ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳವರೆಗೆ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕೊರೋನಾ ನಿಯಂತ್ರಣಕ್ಕಾಗಿ ಈ ಕಠಿಣ ರೂಲ್ಸ್ ಜಾರಿಗೆ ತರಲಾಗಿದೆ. ಇದೊಂತರ ಲಾಕ್ ಡೌನ್ ತರವೇ ಆಗಿದ್ದರೂ, ಲಾಕ್ ಡೌನ್ ಪದ ಬಳಸೋದಿಲ್ಲ. ನೀವು ಹೇಗ್ ಬೇಕೋ ಹಾಕೆ ಹಾಕಿಕೊಳ್ಳಿ ಅಂತ ಸ್ವತಹ ಸಿಎಂ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಹೀಗಾಗಿ ಲಾಕ್ ಡೌನ್ ಘೋಷಣೆಯಾದ ಕಾರಣ, ರಾಜ್ಯಾಧ್ಯಂತ ನಾಳೆಯಿಂದ ಎಣ್ಣೆ ಅಂಗಡಿ ಓಪನ್ ಆಗುತ್ತೋ ಇಲ್ಲವೋ ಅಂತ, ಮದ್ಯದಂಗಡಿ ಮುಂದೆ ಎಣ್ಣೆ ಖರೀದಿಗಾಗಿ ಮುಗಿ ಬಿದ್ದಿದ್ದಾರೆ.
NEWS DESK
TIMES OF BENGALURU