ಅನೈತಿಕ ಸಂಬಂಧ; ಕೊಲೆಗೆ ಯತ್ನಿಸಿದ ಪತ್ನಿ

ಬೆಂಗಳೂರು : ಅನೈತಿಕ ಸಂಬಂಧ ಪ್ರಶ್ನಿಸಿದ ಟೆಕ್ಕಿಯೊಬ್ಬನ ಮೇಲೆ ಆತನ ಹೆಂಡತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ನಗರದ ಸೀಗೇಹಳ್ಳಿಯ ರವಿ ಪ್ರಕಾಶ್ ಮಿಶ್ರಾ (41) ಹಲ್ಲೆಗೆ ಒಳಗಾಗಿರುವ ಟೆಕ್ಕಿ. ಇವರು ನೀಡಿದ ದೂರಿನ ಮೇರೆಗೆ ಟೆಕ್ಕಿ ಪತ್ನಿ, ಸ್ಮಿತಾ ಮಿಶ್ರಾ ಮತ್ತು ಉತ್ಕರ್ಷ ಭಟ್ನಾಗರ್ ಎಂಬಾತನ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸ್ಮಿತಾ ಮತ್ತು ಆಕೆ ಪ್ರಿಯಕರ ಉತ್ಕರ್ಷ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NEWS DESK

TIMES OF BENGALURU