ಕೋವಿಡ್ ರೂಲ್ಸ್ ಬ್ರೇಕ್ : ಬೃಹತ್ ಮಟ್ಟದಲ್ಲಿ ದಂಡ ಸಂಗ್ರಹ

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘನೆ ಆರೋಪ ಸಂಬಂಧ ಕಳೆದ 10 ದಿನಗಳಲ್ಲಿ ಒಟ್ಟು 1 ಲಕ್ಷದ 60 ಸಾವಿರ ರೂ.ಗಳನ್ನು ಬಿಬಿಎಂಪಿ ದಂಡ ಸಂಗ್ರಹ ಮಾಡಿದೆ. ಕೋವಿಡ್ ಮಹಾಮಾರಿ ಎಲ್ಲೆಡೆ ಹಬ್ಬುತ್ತಿರುವ ಕಾರಣ ಸರಕಾರ ಕಠಿಣ ಕ್ರಮ ಕೈಗೊಂಡಿದ್ದು, ಇದರ ನಡುವೆಯೂ ಹಲವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸುರಕ್ಷಿತ ಅಂತರ ಕಾಯ್ದುಕೊಂಡಿರದ ಕಾರಣ 10 ಸಾವಿರ ರೂ. ದಂಡ ಸೇರಿದಂತೆ ಒಟ್ಟು 1 ಲಕ್ಷದ 60 ಸಾವಿರ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

NEWS DESK

TIMES OF BENGALURU