ಡಿಜೆ ಹಳ್ಳಿ ಗಲಭೆ ಪ್ರಕರಣ : ಜಾಮೀನು ಅರ್ಜಿ ವಜಾ

ಬೆಂಗಳೂರು: ಕಳೆದ ವರ್ಷ ಆಗಸ್ಟ್‍ನಲ್ಲಿ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ 18 ಆರೋಪಿಗಳ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳ ಪ್ರಕರಣಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.ಸೈಯದ್ ಇಕ್ರಾಮುದ್ದೀನ್, ಶೇಖ್ ಮಹಮ್ಮದ್ ಬಿಲಾಲ್, ಸೈಯದ್ ಆಸೀಫ್, ಮೊಹಮ್ಮದ್ ಅತೀಫ್, ಮುದಾಸಿರ್ ಕಲೀಂ, ನಕೀಬ್ ಪಾಷಾ, ಇಮ್ರಾನ್ ಅಹ್ಮದ್, ಮೊಹಮ್ಮದ್ ಅರ್ಜ, ಕರೀಂ ಸದ್ದಾಂ ಸೇರಿದಂತೆ 18 ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳು ಪೊಲೀಸ್ ಠಾಣೆಗೆ ಬೆಂಕಿ ಹಾಕಿ ವ್ಯಾಪಕ ಪ್ರಮಾಣದ ಹಾನಿ ಉಂಟು ಮಾಡಿದ್ದರು.

ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಗಳು ಮತ್ತು ಹೊರಗೆ ನಿಲ್ಲಿಸಿದ್ದ ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿದ್ದರು.ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ್ದ ಡಿಸಿಪಿ ಕಾರಿನ ಗಾಜು ಒಡೆದು ಉರುಳಿಸಲು ಯತ್ನಿಸಿದ್ದರು. ಅಲ್ಲದೆ, ಸಂಚು ರೂಪಿಸಿ ಗಲಭೆ ಮಾಡಿ ಸಾರ್ವಜನಿಕವಾಗಿ ಭೀತಿ ಮೂಡಿಸಿದ ಆರೋಪ ದುಷ್ಕರ್ಮಿಗಳ ಮೇಲಿದೆ. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಎನ್‍ಐಎ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈಗಾಗಲೇ ಪ್ರಾಥಮಿಕ ಆರೋಪಪಟ್ಟಿ ಎನ್‍ಐಎ ಸಲ್ಲಿಸಿದೆ.

NEWS DESK

TIMES OF BENGALURU