ಬೆಂಗಳೂರು: ನಿನ್ನೆ ನಡೆದ ಸಂಪುಟ ಸಭೆಯಯಲ್ಲಿ ಸಚಿವ ಎಂಟಿಬಿ ನಾಗರಾಜ್ ಆರೋಗ್ಯ ಸಚಿವ ಸುಧಾಕರ್ ಕಾರ್ಯ ವೈಫಲ್ಯತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಬೆಡ್ ಕೊಡಿಸಿ,ಆಸ್ಪತ್ರೆ ಸಿಗ್ತಿಲ್ಲ ಅಂತ ನನ್ನ ಕ್ಷೇತ್ರದಲ್ಲಿ ದಿನವೂ ಹಲವು ಕರೆಗಳು ಬರ್ತಿವೆ. ನಮ್ಮ ಸಂಬಂಧಿಕರಿಗೆ ಹಾಸಿಗೆ ಸಿಗದೇ ಪರದಾಡಿದ್ರು. ನಾನೇ ಖುದ್ದು ಆರೋಗ್ಯ ಸಚಿವರಿಗೆ ಮೂರು ಭಾರಿ ಕರೆ ಮಾಡಿದೆ. ಒಂದೇ ಒಂದು ಬೆಡ್ ಅಡ್ಜಸ್ಟ್ ಮಾಡೋಕೆ ಆಗಲಿಲ್ಲ. ಸಚಿವನಾದ ನನಗೇ ಹೀಗಾದ್ರೆ ಜನಸಾಮಾನ್ಯರ ಪಾಡೇನು..? ಎಂದು ಎಲ್ಲರೆದುರು ಪ್ರಶ್ನಿಸಿದ್ದಾರೆ.
NEWS DESK
TIMES OF BENGALURU