ಬೆಂಗಳೂರು: ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮೃತದೇಹಗಳನ್ನು ವಿದ್ಯುತ್ ಚಿತಾಗಾರಗಳಿಗೆ ತರುವ ಮುನ್ನ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಬೇಕಿದೆ. ನೋಂದಣಿ ಮಾಡಿಸಲು ಹಾಗೂ ಕೋವಿಡ್ನಿಂದ ಸತ್ತವರ ಮೃತದೇಹ ಸಾಗಣೆ ವಾಹನದ ಸೌಕರ್ಯ ಕಲ್ಪಿಸಲು ಸಹಾಯವಾಣಿಯನ್ನು ಬಿಬಿಎಂಪಿ ಆರಂಭಿಸಿದೆ.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಗೆ ಬರುವ ಸುಮನಹಳ್ಳಿ, ಕೆಂಗೇರಿ ಮತ್ತು ಪೀಣ್ಯ ವಿದ್ಯುತ್ ಚಿತಾಗಾರಗಳನ್ನು ಕೋವಿಡ್ ಸೋಂಕಿನಿಂದ ಮೃತರಾದವರ ಅಂತ್ಯಕ್ರಿಯೆ ಮಾಡಲು ಮೀಸಲಿಡಲಾಗಿದೆ. ಸಹಾಯವಾಣಿಗೆ ಕರೆ ಮಾಡಿ ಕೋವಿಡ್ನಿಂದ ಸತ್ತವರ ಅಂತ್ಯಕ್ರಿಯೆಗೆ ಹೆಸರು ನೋಂದಣಿ ಮಾಡುವುದು ಕಡ್ಡಾಯ. ಹೆಸರು ನೋಂದಣಿ ಮಾಡದೆಯೇ ಮೃತದೇಹಗಳ ಅಂತ್ಯಕ್ರಿಯೆಗೆ ಅವಕಾಶ ಇರುವುದಿಲ್ಲ’ ಎಂದು ಆರ್.ಆರ್.ನಗರ ವಲಯದ ಜಂಟಿ ಆಯುಕ್ತ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
NEWS DESK
TIMES OF BENGALURU