ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ 14 ದಿನ ಕಠಿಣ ನಿಯಮ ಜಾರಿಗೊಳಿಸಲಾಗ್ತಿದೆ. ಲಾಕ್ಡೌನ್ ಮಾದರಿಯಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಿದ್ದು, ಇಂದು ರಾತ್ರಿ 9 ಗಂಟೆಯಿಂದ ಕಠಿಣ ನಿಯಮ ಜಾರಿಗೆ ಬರಲಿದೆ. ಮುಂದಿನ 14 ದಿನಗಳ ಕಾಲ ಎಲ್ಲರೂ ಸಹಕಾರ ನೀಡಬೇಕು. ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಇನ್ನಷ್ಟು ದಿನ ಕಠಿಣ ಕ್ರಮ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
NEWS DESK
TIMES OF BENGALURU