ಸರಳವಾಗಿ ಮುಕ್ತಾಯಗೊಂಡ ಕರಗ ಮಹೋತ್ಸವ

ಬೆಂಗಳೂರು : ನಗರದಲ್ಲಿ ಕೊರೋನಾ ಅಬ್ಬರಿಸುತ್ತಿದೆ. 2ನೇ ಅಲೆಯ ಅಬ್ಬರದಲ್ಲಿ ರಾಜ್ಯ ರಾಜಧಾನಿಯ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿವರ್ಷದಂತೆ ನಡೆಯಬೇಕಿದ್ದಂತ ಐತಿಹಾಸಿಕ ಕರಗ, ಈ ಬಾರಿ ಯಾವುದೇ ಅದ್ದೂರಿಯಿಲ್ಲದೇ, ಹೂವಿನ ಕರಗದ ಮೂಲಕ ಮುಕ್ತಾಯಗೊಂಡಿದೆ. 11 ದಿನಗಳ ಈ ಕರಗೋತ್ಸವದಲ್ಲಿ ಹೂವಿನ ಕರಗವೇ ಮುಖ್ಯವಾಗಿತ್ತು.

ನಗರದಲ್ಲಿನ ಕೊರೋನಾ ಸೋಂಕಿನ ಭೀತಿಯ ಕಾರಣದಿಂದಾಗಿ ಐತಿಹಾಸಿಕ ಕರಗವು, ಸದ್ದಿಲ್ಲದೇ ನಡೆದಂತ ಹೂವಿನ ಕರಗದ ಮೂಲಕ ಮುಕ್ತಾಯಗೊಂಡಿದೆ. ಈ ಮೂಲಕ ಬೆಂಗಳೂರಿನ ಪ್ರಸಿದ್ದ ಕರಗೋತ್ಸವಕ್ಕೆ ಕೊರೋನಾ ಕರಿನೆರಳಿನ ಮಧ್ಯೆ, ಸರಳವಾಗಿ ಮುಕ್ತಾಯಗೊಂಡಿದೆ.

NEWS DESK

TIMES OF BENGALURU