ನಟ ಕೋಮಲ್‍ಗೆ ಕೊರೋನಾ ಪಾಸಿಟಿವ್

ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಭಣವಾಗ್ತಿದ್ದು, ಈ ಮಧ್ಯೆ ನಟ ಕೋಮಲ್‌ ಅವರಿಗೆ ಸೋಂಕು ದೃಢಪಟ್ಟಿತ್ತು ಅನ್ನೋ ವಿಷಯ ಬಹಿರಂಗವಾಗಿದೆ. ಹೌದು, ಈ ವಿಷ್ಯವನ್ನ ಸ್ವತಃ ಕೋಮಲ್ ಅವರ ಅಣ್ಣ ಜಗ್ಗೇಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ಮಾಹಿತಿ ನೀಡಿದ ನಟ ಜಗ್ಗೇಶ್‌, ಕೋಮಲ್​ ಕೊರೊನಾಗೆ ಒಳಗಾಗಲು ಬೆಂಗಳೂರು ಕಾರ್ಪೋರೇಷನ್​ನಲ್ಲಿನ ಲಂಚಬಾಕ ಅಧಿಕಾರಿಗಳೇ ಕಾರಣ ಎಂದಿದ್ದು, ತನ್ನ ಪಾಡಿಗೆ ತಾನು ಕೆಲಸಮಾಡಿಕೊಂಡಿದ್ದ ಕೋಮಲ್​ನನ್ನು ಬಿಲ್​ ಪಾವತಿ ಮಾಡದೇ ಲಂಚಬಾಕ ಅಧಿಕಾರಿಗಳು ಅಲೆಸಿಬಿಟ್ಟರು. ಪದೇ ಪದೆ ತೆರಳಿ ಅವರನ್ನು ಭೇಟಿ ಮಾಡಿ ಬರುತ್ತಿದ್ದ ಕೋಮಲ್​ಗೆ ಕೊರೊನಾ ಬಂತು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

NEWS DESK

TIMES OF BENGALURU