ಪಾಸಿಟಿವ್ ಬಂದವ್ರು ಮೊಬೈಲ್ ಸ್ವಿಚ್ ಆಫ್ ಮಾಡ್ಕೊಳ್ತಿದ್ದಾರೆ

ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಶೇಕಡ 20 ಪರ್ಸೆಂಟ್‌ ಜನರು ತಮ್ಮ ಫೋನ್ಗಳನ್ನ ಸ್ವಿಚ್ ಆಫ್ ಮಾಡಿಕೊಳ್ತಿದ್ದಾರೆ. ಪತ್ತೆ ಹಚ್ಚೋಕೆ ಸಾಧ್ಯವಾಗದಂತೆ ಮನೆ ಬಿಟ್ಟು ಬೇರೆಡೆ ಹೋಗ್ತಿದ್ದಾರೆ. ಗಂಭೀರವಾದ್ಮೇಲೆ ಬಂದು ಬೆಡ್ ಸಿಗ್ತಿಲ್ಲ ಅಂತಾ ಅಲೆದಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇನ್ನು ಇದೇ ವೇಳೆ ಸಾರ್ವಜನಿಕರ ವರ್ತನೆಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವ್ರು, ಕೋವಿಡ್ ಪಾಸಿಟಿವ್ ಆಗಿ ಮೆಸೇಜ್ ಬರುತ್ತದೆ. ಹೀಗೆ ಮೆಸೇಜ್ ಬಂದಾಗ ಪಾಸಿಟಿವ್ ಬಂದ 20 ಪರ್ಸೆಂಟ್​ಗೂ ಮೇಲ್ಪಟ್ಟು ಜನರು ಸ್ವಿಚ್ ಆಫ್ ಮಾಡ್ಕೊಳ್ತಿದ್ದಾರೆ. ಮನೆ ಚೇಂಜ್ ಮಾಡ್ಕೊಳ್ತಾರೆ. ಗಂಭೀರ ಆದ ಮೇಲೆ ಆಸ್ಪತ್ರೆಗೆ ಬರ್ತಿದ್ದಾರೆ. ಟ್ಯಾಬ್ಲೆಟ್ ತಗೊಂಡ್ರೆ 90 ಪರ್ಸೆಂಟ್ ಗುಣವಾಗುತ್ತದೆ, ಸೀರಿಯಸ್ ಆದ ಮೇಲೆ ಬೆಡ್​ಗೆ ಅಲೆಯೋದು ಸರಿಯಲ್ಲ ಎಂದರು.

NEWS DESK

TIMES OF BENGALURU