50ಪರ್ಸೆಂಟ್‌ನಷ್ಟು ಕಾರ್ಯನಿರ್ವಹಿಸಲು  ಒತ್ತಾಯ

ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಇದು ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಲಾಕ್ ಡೌನ್ ಅವಧಿಯಲ್ಲಿ ಗಾರ್ಮೆಂಟ್ಸ್‌ ಹೊರತುಪಡಿಸಿ, ಉತ್ಪಾದಕ ವಲಯ, ಕೃಷಿ ವಲಯಕ್ಕೆ ಲಾಕ್ ಡೌನ್‌ನಿಂದ ವಿನಾಯಿತಿ ಇದೆ” ಎಂದು ಹೇಳಿದ್ದರು. ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಲಾಕ್ ಡೌನ್ ಅವಧಿಯಲ್ಲಿ ಗಾರ್ಮೆಂಟ್ಸ್‌ಗಳು ಸಹ ಶೇ 50ರಷ್ಟು ಉದ್ಯೋಗಿಗಳ ಜೊತೆ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಒತ್ತಾಯಿಸಿದೆ.

NEWS DESK

TIMES OF BENGALURU