ಬೆಂಗಳೂರು: ನಗರದ ಹೊರವಲಯದ ಆನೇಕಲ್ ನಲ್ಲಿ ಆಸ್ಪತ್ರೆ ಎದುರಲ್ಲೇ ಕೊರೋನಾ ಸೋಂಕಿತ ನರಳಿ ಪ್ರಾಣ ಬಿಟ್ಟ ಘನಘೋರ ಘಟನೆ ನಡೆದಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರತೆ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಈ ಘಟನೆ ಬಿಂಬಿಸುವಂತಿದೆ.
ಆನೇಕಲ್ ತಾಲ್ಲೂಕು ಹಾಲ್ದೇನಹಳ್ಳಿಯ ನಿವಾಸಿಯಾಗಿದ್ದ ಸೋಂಕು ತಗಲಿದ್ದು, ಅವರಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಆದರೆ, ಪಾಸಿಟಿವ್ ಬಂದಿದ್ದರೂ ವರದಿ ಬರುವುದು ವಿಳಂಬವಾದ ಕಾರಣ ಬೆಡ್ ಸಿಕ್ಕಿರಲಿಲ್ಲ. ಆಸ್ಪತ್ರೆ ಎದುರಲ್ಲೇ ಕಾದು ಕುಳಿತಿದ್ದ ಅವರು ಸೋಂಕು ತೀವ್ರಗೊಂಡು ನರಳಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ.
NEWS DESK
TIMES OF BENGALURU