ರೋಚಕ ಗೆಲುವು ಸಾಧಿಸಿದ ಆರ್ ಸಿಬಿ

ಅಹ್ಮದಾಬಾದ್: ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್‌, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಬೌಲಿಂಗ್ ನೆರವಿನಿಂದ ಆರ್‌ಸಿಬಿ ಈ ಐಪಿಎಲ್‌ ಸೀಸನ್‌ನಲ್ಲಿ 5ನೇ ಜಯ ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 27) ನಡೆದ ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ರೋಚಕ ಜಯ ಗಳಿಸಿದೆ.ಕೇನ್ ರಿಚರ್ಡ್ಸನ್ ಬದಲು ಆರ್‌ಸಿಬಿ ತಂಡ ಸೇರಿದ ಸ್ಕಾಟ್ ಕುಗ್ಗೆಲೀಜ್ನ್ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತ್ತು.

NEWS DESK

TIMES OF BENGALURU