ಕೋವಿಡ್​ ಕೇರ್​ ಸೆಂಟರ್​​​ಗೆ ಚಾಲನೆ

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್​​ ಟಿ.ದಾಸರಹಳ್ಳಿ ಬಿಬಿಎಂಪಿ ವ್ಯಾಪ್ತಿಯ ಬಾಗಲುಗುಂಟೆಯ ಕಾರ್ಮಿಕ ಭವನದಲ್ಲಿ ಸ್ಥಾಪಿಸಿರುವ ಕೋವಿಡ್​ ಕೇರ್​ ಸೆಂಟರ್​​​ಗೆ ಚಾಲನೆ ನೀಡಿದರು. ಇದು ರೋಗ ಲಕ್ಷಣ ರಹಿತ ಸೋಂಕಿತರ ಆರೈಕೆ ಕೇಂದ್ರವಾಗಿದ್ದು, ಒಟ್ಟು 200 ಬೆಡ್​​ಗಳಿವೆ.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ಈಗಾಗಲೆ 12 ಸೆಂಟರ್ ಮಾಡಲಾಗಿದೆ. . ಇದು 13ನೇ ಸೆಂಟರ್. 130 ಬೆಡ್ ಇದ್ದು, 10 ಆಕ್ಸಿಜನ್ ಬೆಡ್ ಸಹ ಮಾಡಲಾಗುವುದು. 14 ದಿನಗಳ ಪಾಳಿಯಲ್ಲಿ ವೈದ್ಯರು ಕೆಲಸ ಮಾಡುವರು. ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್​ನ್ನು ಇಲ್ಲಿ ಮಾಡಲಾಗಿದೆ ಎಂದರು. ಇನ್ನು, ಕೊರೋನಾ ಪಾಸಿಟಿವ್ ಬಂದ ತಕ್ಷಣ ಸುಮಾರು ಜನ ಫೋನ್​​ ಸ್ವಿಚ್ ಆಫ್ ಮಾಡಿದ್ದಾರೆ. ಸ್ವಿಚ್ ಆಫ್ ಮಾಡಿ ಮನೆಗಳನ್ನ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಕೈಮುಗಿದು ಬೇಡಿಕೊಳ್ತೇನೆ ಯಾರು ಈ ತರ ಮಾಡಬೇಡಿ ಇದರಿಂದ ಸೋಂಕು ಹೆಚ್ಚಳವಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

NEWS DESK

TIMES OF BENGALURU