ಬೆಂಗಳೂರು: ಸದಾ ಜನರಿಂದ ಗಿಜಿಗುಡುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಖಾಲಿಖಾಲಿ ಅನ್ನಿಸುತ್ತಿದೆ. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಜಾರಿಯಾಗಿದ್ದು, ಇಡೀ ಬೆಂಗಳೂರು ಸ್ತಬ್ಧಗೊಂಡಂತೆ ಭಾಸವಾಗುತ್ತಿದೆ. ಸಾರಿಗೆ ಸಂಚಾರ ಬಂದ್ ಆಗಿದ್ದು, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಬೆಂಗಳೂರಿಗೆ ಲಾಕ್ ಆದರೂ ಗುಳೇ ತಪ್ಪಿಲ್ಲ. ಸಾವಿರಾರು ಮಂದಿ ರೈಲು ನಿಲ್ದಾಣದ ಬಳಿ ಸ್ವಗ್ರಾಮಕ್ಕೆ ಹೋಗಲು ಕಾಯುತ್ತಿದ್ದಾರೆ. ಇನ್ನು ಬೆಳಗ್ಗೆ 6ರಿಂದ 10ರವರೆಗೆ ಮಾತ್ರವೇ ಅಗತ್ಯ ವಸ್ತು ಮಾರಾಟ-ಖರೀದಿ ವಹಿವಾಟು ನಡೆದಿದ್ದು, ಗಡುವು ಮೀರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುಚ್ಚಿಸುತ್ತಿದ್ದಾರೆ .
NEWS DESK
TIMES OF BENGALURU