ಕರ್ಫ್ಯೂ ವೇಳೆ ಕಳ್ಳತನವೆಸಗುತ್ತಿದ್ದ ಆರೋಪಿಗಳು ಅರೆಸ್ಟ್

ಬೆಂಗಳೂರು : ಕೊರೊನಾ ಹರಡುತ್ತಿರುವ ಹಿನ್ನಲೆ ಸರ್ಕಾರ ಕರ್ಪ್ಯೂ ಜಾರಿ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಮೂವರು ಕಳ್ಳರು, ಮನೆಯಲ್ಲಿ ಯಾರು ಇಲ್ಲದಾಗ ಮಧ್ಯಾಹ್ನವೇ ಮನೆಯಲ್ಲಿ ಊಟ ಮಾಡಿ ಕಳ್ಳತನ ಮಾಡಿದ್ದಾರೆ. ಪೊಲೀಸರಿಗೆ ತಲೆನೋವಾಗಿದ್ದ ಈ ಆರೋಪಿಗಳಿಗೊಸ್ಕರ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾರಣೆ ನಡೆಸಿ ಯೋಗಿಶ್,ಯಶವಂತ, ಮೋಹನ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ 17 ರಂದು ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಕಳ್ಳರನ್ನು ಕಂಡು ಬಾತ್ಮೀದಾರರು ಕೊಟ್ಟ ಮಾಹಿತಿ ಮೇರೆಗೆ ಆರೋಪಿಗಳ ವಿಚಾರಣೆಯನ್ನು ಕೈಗೊಂಡಿದ್ದರು.ಆರೋಪಿಗಳಿಂದ 44 ಲಕ್ಷದ ಚಿನ್ನಾಭರಣ, 921 ಗ್ರಾಂ ವಜ್ರವನ್ನು ವಶಪಡಿಸಿಕೊಂಡಿದ್ದಾರೆ.

NEWS DESK

TIMES OF BENGALURU