ಸತ್ತರೆ ಸಾಯಲಿ ಅಂದ್ರೆ ಇವರೇಕೆ ಮಂತ್ರಿಯಾಗಿರಬೇಕು

ಬೆಂಗಳೂರು : ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ  ಡಿಕೆ ಶಿವಕುಮಾರ್ ಅವರು, ಇದು ಬಿಜೆಪಿ ಸಂಸ್ಕoತಿ ಸರ್ಕಾರದ ಯಾವ ಮಂತ್ರಿಗಳು ಇದರ ಬಗ್ಗೆ ಮಾತನಾಡಿ ಎಂದು ಹೇಳುವುದಿಲ್ಲ. ಮಂತ್ರಿಗಳ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರು ಹೆಚ್ಚಿಲ್ಲ, ಯಾರು ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು ಎಂದರು. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು.

ಬಿಜೆಪಿ ನಾಯಕರು ಉತ್ತರ ಕೊಡಬೇಕು. ರೈತರು ಅಧಿಕಾರದಲ್ಲಿ ಇದ್ದವರಿಗೆ ಕೇಳ್ತಾರೆ. ಅಧಿಕಾರ ಇರೋರ ಬಳಿ ಜನ ಕೇಳ್ತಾರೆ. ಅಕ್ಕಿ ಕೊಡಿ ಎಂದು ಕೇಳಿದ್ರೆ, ಸತ್ರೆ ಸಾಯಿ ಎಂದು ಹೇಳಿದ್ರೆ, ಯಾಕೆ ಇವರು ಮಂತ್ರಿ ಆಗಿ ಇರಬೇಕು. ಕೂಡಲೇ ಸಿಎಂ ರಾಜೀನಾಮೆ ತೆಗೆದುಕೊಳ್ಳಬೇಕು. ಜನರ ಬಳಿ ಕ್ಷಮೆ ಕೇಳುವುದಕ್ಕೂ ಮೊದಲು ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.

NEWS DESK

TIMES OF BENGALURU