3000ಕ್ಕೂ ಹೆಚ್ಚು ಸೋಂಕಿತರು ನಾಪತ್ತೆ

ಬೆಂಗಳೂರು: ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹರಡುವಿಕೆ ಆತಂಕದ ನಡುವೆ ಬೆಂಗಳೂರಿನಿಂದ 3000ಕ್ಕೂ ಹೆಚ್ಚು ಸೋಂಕಿತರು ಕಾಣೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಬಹುತೇಕ 3000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತರು ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾವು ನೀಡಿರುವ ವಿಳಾಸದಿಂದಲೂ ನಾಪತ್ತೆ ಆಗಿದ್ದು, ಪೊಲೀಸರು ಕಾಣೆಯಾಗಿರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ ಎಂದು ಹೇಳಿದರು.

NEWS DESK

TIMES OF BENGALURU