ಕರ್ಫ್ಯೂ ಪಾಸ್ ಬಗ್ಗೆ ಕಮಲ್ ಪಂತ್ ಸ್ಪಷ್ಟನೆ

ಬೆಂಗಳೂರು : ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ಪೊಲೀಸ್ ವತಿಯಿಂದ ಸಂಚಾರ ಕುರಿತು ಯಾವುದೇ ರೀತಿಯ ಪಾಸ್‍ಗಳನ್ನು ವಿತರಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸರಕಾರದ ಆದೇಶದಲ್ಲಿ ವಿನಾಯಿತಿ ನೀಡಿರುವ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಸ್ಥಳಗಳಿಗೆ ಗುರುತಿನ ಚೀಟಿ ಅಥವಾ ಸಮರ್ಥನೀಯ ದಾಖಲಾತಿಗಳನ್ನು ಹಾಜರುಪಡಿಸಿ ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.

NEWS DESK

TIMES OF BENGALURU