ಗಂಟೇಗಟ್ಟಲೇ ಚಿತಗಾರದ ಬಳಿ ಆ್ಯಂಬುಲೆನ್ಸ್ ಗಳ ಕ್ಯೂ

ಬೆಂಗಳೂರು : ಕೊರೋನಾ ಎರಡನೇ ಅಲೆಯ ಅಟ್ಟಹಾಸ ಮುಂದುವರೆದಿದ್ದು, ಪ್ರತಿ ದಿನ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ..ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಗಂಟೇಗಟ್ಟಲೇ ಚಿತಗಾರದ ಬಳಿ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ಬಂದಿದೆ.

ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 137 ಮಂದಿ ಸೋಂಕಿಗೆ ಬಲಿಯಾಗಿದ್ದು, ಇಂದು ಬೆಳ್ಳಂಬೆಳ್ಳಗೆ ಸುಮನಹಳ್ಳಿ ಚಿತಾಗಾರ ಮುಂದೆ 14ಕ್ಕೂ ಹೆಚ್ಚು ಆಯಂಬುಲೆನ್ಸ್ ಗಳು ಕ್ಯೂ ನಿಂತಿದ್ದು, ಕೊರೋನಾ ಕರಾಳತೆಗೆ ಸಾಕ್ಷಿಯಾಗಿದೆ..ಕೋವಿಡ್ ನಿಂದ ಮೃತಪಟ್ಟ ಶವಗಳನ್ನು ಆ್ಯಂಬುಲೆನ್ಸ್ ನಲ್ಲಿ ಇಟ್ಟುಕೊಂಡು ಕುಟುಂಬಸ್ಥರು ಕಾಯುತ್ತಿದ್ದಾರೆ. ಹೆಚ್ಚಿನ ಕ್ಯೂ ಹಿನ್ನೆಲೆ 8 ಗಂಟೆ ಯಿಂದಲೆ ದಹನ‌ ಕಾರ್ಯ ಪ್ರಾರಂಭಿಸಿದ್ದು, ಈಗಾಗಲೇ ಒಟ್ಟು 19 ಮೃತ ದೇಹಗಳ ಪೈಕಿ 6 ಮೃತದೇಹಗಳನ್ನ ದಹನ ಮಾಡಿದ್ದಾರೆ.

NEWS DESK

TIMES OF BENGALURU