ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ಅನಗತ್ಯ ವೆಚ್ಚ ಕಡಿಮೆ ಮಾಡಲಿ. ಸ್ಪೆಷಲ್ ಸೆಕ್ರೆಟರಿ ತೆಗೆಯಿರಿ. ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಿ. ಅಭಿವೃದ್ಧಿ ಕೆಲಸ ಈಗ ನಿಲ್ಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ ಅಕ್ಕಿ ಕೊಡಲು 20-30 ಕೋಟಿ ಮೀಸಲಿಡಲಿ. ಬಿಪಿಎಲ್ ಕಾರ್ಡ್ ದಾರರಿಗೆ ಹಣ ಕೊಡಲಿ. ಜೇಬಿನಲ್ಲಿ ದುಡ್ಡು ಇದ್ದರೆ ಮಾತ್ರ ಮಾರುಕಟ್ಟೆ ಗೆ ಹೋಗಿ ಹಣ್ಣು ತರಕಾರಿ ತರಬಹುದು. ಹೀಗಾಗಿ ಮೊದಲು ಅವರ ಜೇಬಿಗೆ ದುಡ್ಡು ಹಾಕಲಿ ಎಂದಿದ್ದಾರೆ.
NEWS DESK
TIMES OF BENGALURU