ಕರ್ನಾಟಕಕ್ಕೆ ಬರುವವರಿಗೆ ಆರ್ ಟಿಪಿಸಿ ಕಡ್ಡಾಯ

ಬೆಂಗಳೂರು : ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಜನರಿಂದ ಕರೊನಾ ಹರಡುವುದನ್ನು ತಪ್ಪಿಸಲು ಗಡಿ ಪ್ರದೇಶಗಳಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ ಭಾಗದಿಂದ ಬರುವ ಗಡಿಗಳಲ್ಲಿ ಬಿಗಿ ಭದ್ರತೆ ಮಾಡಲಾಗುವುದು. ನಾಳೆಯಿಂದ ಗಡಿಗಳು ಇನ್ನಷ್ಟು ಭದ್ರವಾಗಲಿವೆ ಎಂದಿದ್ದಾರೆ. ಕರ್ನಾಟಕ ಗಡಿಯನ್ನು ಪ್ರವೇಶಿಸುವಾಗ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು. ಬೆಂಗಳೂರು ಗ್ರಾಮಾಂತರ ಎಸ್ಪಿಗೆ ಈ ಬಗ್ಗೆ ಸೂಚನೆ ಕೊಡುತ್ತೇನೆ. ಪ್ರತಿ ವಾಹನ ತಪಾಸಣೆಗೆ ಸೂಚನೆ ನೀಡುತ್ತೇನೆ. ಗಡಿಯಲ್ಲಿ ನುಗ್ಗುವವರ ಮೇಲೆ ತಡೆಗಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದ್ದಾರೆ.

NEWS DESK

TIMES OF BENGALURU