ಈ ಪರಿಸ್ಥಿತಿಗೆ ಬರೋಕೆ ನಾವೇ ಕಾರಣ

ಕೊರೊನಾ ವೈರಸ್​ ಸಾಕಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೊರೊನಾ ಬಂದಿದೆ ಎಂದು ಇಂದು ಆಸ್ಪತ್ರೆ ಸೇರಿದವರು ನಾಳೆ ಎನ್ನುವ ವೇಳೆಗೆ ಮೃತಪಟ್ಟ ಸಾಕಷ್ಟು ಉದಾಹರಣೆ ಇದೆ. ಮೊದಲ ಅಲೆಗಿಂತ ಭೀಕರವಾಗಿ ಎರಡನೆ ಅಲೆ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸುವ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ವಿಡಿಯೋ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಟ ನೀನಾಸಂ ಸತೀಶ್​ ಕೂಡ ಈ ಬಗ್ಗೆ ವಿಡಿಯೋ ಮಾಡಿ ಹಾಕಿದ್ದಾರೆ. ಅವರ ದೊಡ್ಡಮ್ಮ ಇತ್ತೀಚೆಗೆ ಮೃತಪಟ್ಟಿದ್ದರಂತೆ. ಅವರ ಮುಖ ನೋಡಲು ಸತೀಶ್​ ಅವರಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿರುವ ನೀನಾಸಂ ಸತೀಶ್​, ಪ್ರತಿಯೊಬ್ಬರೂ ಎಚ್ಚರಿಕೆ ಕೊಡುತ್ತಾ ಇದಾರೆ. ಈ ಪರಿಸ್ಥಿತಿ ಬರೋಕೆ ನಾವೆ ಕಾರಣಎಂದು ಹೇಳಿದ್ದಾರೆ.

NEWS DESK

TIMES OF BENGALURU