ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡ್ತೀವಿ

ಬೆಂಗಳೂರು: ಉದ್ಧಟತನದ ಹೇಳಿಕೆ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೈತ ನಾಯಕರೊಬ್ಬರು ಉಮೇಶ್ ಕತ್ತಿಗೆ ಕರೆ ಮಾಡಿ ನೀವು ಎರಡು ಕೆಜಿ ಅಕ್ಕಿ ಕೊಟ್ಟರೆ ಸಾಲುವುದಿಲ್ಲ.

ಅಷ್ಟು ಕಡಿಮೆ ಕೊಟ್ಟರೆ ಹಸಿವಿನಿಂದ ಸಾಯಬೇಕೆ ಎಂದು ಪ್ರಶ್ನೆ ಮಾಡಿದರೆ ಸತ್ತರೆ ಒಳ್ಳೆಯದು ಎಂದು ಕತ್ತಿ ಹೇಳಿದ್ದಾರೆ. ಇದು ಅತ್ಯಂತ ಬೇಜವಾವ್ದಾರಿ ಹಾಗೂ ಉದ್ಧಟತನದ ಹೇಳಿಕೆ. ಮುಖ್ಯಮಂತ್ರಿ ಯಡಿಯೂರಪ್ಪ ಉಮೇಶ್ ಕತ್ತಿ ಹೇಳಿಕೆ ಕೇವಲ ವಿಷಾಧ ವ್ಯಕ್ತ ಪಡಿಸಿದರೆ ಸಾಲದು, ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

NEWS DESK

TIMES OF BENGALURU