ಈ ವಾರ ಬಿಗ್ ಬಾಸ್ ನಲ್ಲಿ ಕಿಚ್ಚನ ದರ್ಶನ

ಬೆಂಗಳೂರು: ಕಳೆದ 2 ವರಾಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ವೀಕೆಂಡ್ ಸಂಚಿಕೆಯಿಲ್ಲದೆ ಕಿಚ್ಚನ ನಿತೂಪಣೆಯನ್ನ ತುಂಬಾನೆ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಹಾಗೂ ಕಿಚ್ಚ ಸುದೀಪ್ ಫ್ಯಾನ್ಸ್ ಈಗ ಮತ್ತೊಮ್ಮೆ ಫುಲ್ ಖುಷ್ ಆಗಿದ್ದಾರೆ. ಆರೋಗ್ಯ ಸುಧಾರಿಸಿದ ಪರಿಣಾಮ ಕಿಚ್ಚ ಸುದೀಪ್ ಅವರು ಈ ವಾರ ವೀಕ್ಷಕರ ಮುಂದೆ ಬರಲಿದ್ಧಾರೆ ಎನ್ನಲಾಗಿದೆ.

ಈ ಸಂಬಂಧ ಟ್ವೀಟ್ ಮಾಡಿ ಸುಳಿವು ನೀಡಿರುವ ಅಭಿನಯ ಚಕ್ರವರ್ತಿ, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೊಡ್ ನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

NEWS DESK

TIMES OF BENGALURU