ಕೊರೋನಾ ನಿಧಿಗೆ 1ವರ್ಷದ ಸಂಬಳ ನೀಡುತ್ತೇವೆ

ಬೆಂಗಳೂರು : ಕೊರೊನಾ ಪರಿಹಾರ ನಿಧಿಗೆ ಎಲ್ಲಾ ಮಂತ್ರಿಗಳಿಂದ ಒಂದು ವರ್ಷದ ಸಂಬಳ ನೀಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.  ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೊರೊನಾ ಪರಿಹಾರ ನಿಧಿಗೆ ಎಲ್ಲಾ ಮಂತ್ರಿಗಳಿಂದ ಒಂದು ವರ್ಷದ ಸಂಬಳ ನೀಡುತ್ತಿದ್ದೇವೆ, ಯಾವ ಜಿಲ್ಲೆಗಳಲ್ಲಿ ಪಾಸಿಟಿವ್ ಹೆಚ್ಚಾಗಿ ಬರುತ್ತಿದೆ., ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಸಚಿವರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದರು. ವ್ಯಾಕ್ಸಿನ್ ವಿತರಣೆ ಅಭಿಯಾನಕ್ಕೆ ಮಾನಿಟರ್ ಮಾಡುವಂತೆ ಸಲಹೆ ನೀಡಿದ್ದಾರೆ, ಬ್ಲಾಕ್ ದಂಧೆಗೆ ಕಡಿವಾಣ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದರು.

NEWS DESK

TIMES OF BENGALURU