ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ

ಬೆಂಗಳೂರು: ನಗರದಲ್ಲಿರುವ ಕೆರೆಗಳ ಪೈಕಿ ಶೇ.30ರಷ್ಟು ಕೆರೆಗಳ ನೀರು ಪ್ರಾಣಿ-ಪಕ್ಷಿಗಳು ಕುಡಿಯಲು ಸಹ ಯೋಗ್ಯವಲ್ಲ. ಕೆರೆಗಳ ನೀರು ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ನಗರದ ಆಕ್ಷನ್‌ ಏಡ್‌ ಅಸೋಸಿಯೇಷನ್‌ ಎಂಬ ಸಂಸ್ಥೆಯು ಇತ್ತೀಚೆಗೆ ನಗರದ ಕೆರೆಗಳ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ನಗರದ ಪೀಣ್ಯ ಹಾಗೂ ದಾಸರಹಳ್ಳಿ ಕೆರೆಗಳ ನೀರು ತುಂಬಾ ಹಾಳಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲದಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಲಾಲ್‌ಬಾಗ್‌, ಯಡಿಯೂರು ಕೆರೆಗಳು ಸುಸ್ಥಿತಿಯಲ್ಲಿದೆ ಎನ್ನುತ್ತಿದೆ ವರದಿ.

NEWS DESK

TIMES OF BENGALURU