ಆದಾಯವಿಲ್ಲದೆ ಬರಿದಾದ ಸರ್ಕಾರದ ಬೊಕ್ಕಸ

ಬೆಂಗಳೂರು : ಕೊರೊನಾ ಎರಡ‌ನೇ ಅಲೆಗೆ ರಾಜ್ಯ ತತ್ತರಿಸಿ ಹೋಗಿದೆ. ಈಗಾಗಲೇ ಕರ್ಪ್ಯೂ ಹೇರಿರುವುದರಿಂದ ಆದಾಯದ ಮೂಲವೇ ಬರಿದಾಗಿರುವ ಸರ್ಕಾರಕ್ಕೆ ಕೋವಿಡ್ ನಿರ್ವಹಣೆ ದೊಡ್ಡ ಸವಾಲಾಗಿದೆ. ಇದೀಗ ಮತ್ತೆ ಸಹಾಯ ಹಸ್ತಗಳತ್ತ ಮುಖ ಮಾಡುವ ಅನಿವಾರ್ಯತೆಗೊಳಗಾಗಿರುವ ಸರ್ಕಾರ ದೇಣಿಗೆ ಸಂಗ್ರಹಿಸಲು ಗಂಭೀರ ಚಿಂತನೆ ‌ನಡೆಸಿದೆ.

ಎರಡನೇ ಅಲೆ ಮೊದಲಿಗಿಂತಲೂ ಭೀಕರವಾಗಿದ್ದು, ಸರ್ಕಾರಕ್ಕೆ ಬಾರಿ ಪ್ರಮಾಣದ ಸಂಪನ್ಮೂಲದ ಅಗತ್ಯತೆ ಎದುರಾಗಿದೆ. ಖಾಲಿಯಾಗಿರುವ ಬೊಕ್ಕಸದ ಹಿನ್ನೆಲೆ ಸರ್ಕಾರ ಮತ್ತೆ ಸಾರ್ವಜನಿಕ ದೇಣಿಗೆಯತ್ತ ಮುಖ ಮಾಡುತ್ತಿದೆ. ಆದರೆ, ಈ ಬಾರಿ ಸಾರ್ವಜನಿಕ ವಲಯ ಹಾಗೂ ಕಾರ್ಪೊರೇಟ್ ವಲಯದಿಂದ ಹೆಚ್ಚಿನ ಸಹಾಯಹಸ್ತ ನಿರೀಕ್ಷಿಸಲು ಸಾಧ್ಯವಿಲ್ಲ.

NEWS DESK

TIMES OF BENGALURU